ಬೆಂಗಳೂರು:ಬಿಗ್ ಬಾಸ್ ಸ್ಪರ್ಧಿ, ಹಿಂದೂ ಫೈರ್ ಬ್ರಾಂಡ್ ಚೈತ್ರ ಕುಂದಾಪುರ ಈಗ ಮಾಡೆಲ್!!

ಬೆಂಗಳೂರು:ಬಿಗ್ ಬಾಸ್ ಸ್ಪರ್ಧಿ, ಹಿಂದೂ ಫೈರ್ ಬ್ರಾಂಡ್ ಚೈತ್ರ ಕುಂದಾಪುರ ಈಗ ಮಾಡೆಲ್!!


ಬೆಂಗಳೂರು : ಹಿಂದುತ್ವದ ಪ್ರಖರ ಭಾಷಣಗಳಿಂದ ಸದಾ ಸುದ್ದಿಯಲ್ಲಿರುತ್ತಿದ್ದ ಚೈತ್ರಾ ಕುಂದಾಪುರ ಇದೀಗ ಮನೋರಂಜಾನ ಲೋಕದತ್ತ ತಿರುಗಿದ್ದಾರೆ. ಕನ್ನಡದ ಬಿಗ್ ಬಾಸ್ ಸೀಸನ್ ಬಳಿಕ ಇದೀಗ ಕಲರ್ಸ್ ಕನ್ನಡದಲ್ಲಿ ಮತ್ತೊಂದು ಶೋ ನಲ್ಲಿ ಭಾಗವಹಿಸಿದ್ದಾರೆ.

ಹಿಂದೂ ಫೈರ್ ಬ್ರ್ಯಾಂಡ್ ಎಂದೇ ಖ್ಯಾತಿ ಪಡೆದಿದ್ದ ಚೈತ್ರಾ ಕುಂದಾಪುರ ಬಿಗ್ ಬಾಸ್ ಗೆ ಹೋದ ಬಳಿಕ ಸಂಪೂರ್ಣ ಬದಲಾಗಿದ್ದಾರೆ. ಸೀರೆಯುಟ್ಟು ಬಿಗ್ ಬಾಸ್ ಮನೆಯಲ್ಲಿ ಎಲ್ಲರ ಮನಸ್ಸು ಗೆದ್ದಿದ್ದ ಚೈತ್ರಾ ಕುಂದಾಪುರ ಅವರಿಗೆ ಬ್ಯೂಟಿ ಪಾರ್ಲರ್ ಗಳಿಂದ ಆಫರ್ ಬರ್ತಿದೆ. ಒಂದಾದ್ಮೇಲೆ ಒಂದು ಬ್ಯೂಟಿ ಪಾರ್ಲರ್, ಸೀರೆ ಅಂಗಡಿಗೆ ಹೋಗುವ ಚೈತ್ರಾ, ವಿಡಿಯೋ ಮಾಡಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡ್ತಿದ್ದಾರೆ.



ಸಾಮಾಜಿಕ ಜಾಲತಾಣದಲ್ಲಿ ಭಾಷಣಗಳಿಂದಲೇ ಅತೀ ಹೆಚ್ಚು ಖ್ಯಾತಿ ಪಡೆದಿದ್ದು ಚೈತ್ರಕ್ಕ ಇದೀಗ ತಮ್ಮ ಸೌಂದರ್ಯದಿಂದ ಗಮನ ಸೆಳೆಯುತ್ತಿದ್ದಾರೆ. ಸೀರೆಯಲ್ಲಿ ಮಿಂಚುತ್ತಿರುವ ಚೈತ್ರಾ ಅವರು ತಮ್ಮ ಸೋಶಿಯಲ್ ಮಿಡಿಯಾದಲ್ಲಿ ಪೋಟೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ.


ಈಗ ಚೈತ್ರಾ ಅವರ ಇನ್ನೊಂದು ವಿಡಿಯೋ ಸಾಕಷ್ಟು ಗಮನ ಸೆಳೆದಿದೆ. ರಾಯಲ್ ಬ್ಲೂ ಪ್ರೀಮಿಯಂ ಸೆಮಿ ಮೈಸೂರು ಕ್ರೇಪ್ ಸೀರೆಯಲ್ಲಿ ಚೈತ್ರಾ ಮಿಂಚಿದ್ದಾರೆ. six_yards_by_designer_trend ಹೆಸರಿನ ಇನ್ಸ್ಟಾ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ರಾಯಲ್ ಬ್ಲೂ ಪ್ರೀಮಿಯಂ ಸೆಮಿ ಮೈಸೂರು ಕ್ರೇಪ್ ಸೀರೆ: ಎ ಟೈಮ್‌ಲೆಸ್ ಕ್ಲಾಸಿಕ್. ರಾಯಲ್ ಬ್ಲೂ ಬಣ್ಣವು ಸೊಬಗು ಮತ್ತು ಅತ್ಯಾಧುನಿಕತೆಯನ್ನು ಹೊರಹಾಕುವ ಬಣ್ಣವಾಗಿದೆ ಎಂದು ಶೀರ್ಷಿಕೆ ನೀಡಲಾಗಿದೆ. ಸೀರೆಯುಟ್ಟು, ಸಿಂಪಲ್ ಮೇಕಪ್ ಮಾಡ್ಕೊಂಡಿರುವ ಚೈತ್ರಾ ಕುಂದಾಪುರ, ಕ್ಯಾಟ್ ವಾಕ್ ಮಾಡ್ತಾರೆ. ಚೈತ್ರಾ ಈ ಸೀರೆ ವಿಡಿಯೋವನ್ನು ಜನರು ಮೆಚ್ಚಿಕೊಂಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ 15 ವಾರ ಇದ್ದ ಚೈತ್ರಾ ತಮ್ಮ ಮಾತಿನಿಂದಲೇ ಎಲ್ಲರನ್ನು ಆಕರ್ಷಿಸಿದ್ದರು. ಮೊದಲಿನಿಂದಲೂ ಉತ್ತಮ ಭಾಷಣಗಾರ್ತಿ ಎಂದೇ ಗುರುತಿಸಿಕೊಂಡಿರುವ ಚೈತ್ರಾ ಈಗ ಡಾನ್ಸ್ ಗೂ ಸೈ ಎಂಬುದನ್ನು ತೋರಿಸಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಡಾನ್ಸ್ ಸ್ಟೆಪ್ ಹಾಕಲು ಕಷ್ಟಪಡ್ತಿದ್ದ ಚೈತ್ರಾ ಕುಂದಾಪುರ, ಬಾಯ್ಸ್ ವರ್ಸಸ್ ಗರ್ಲ್ ಶೋನಲ್ಲಿ ರಜತ್ ಜೊತೆ ಡಾನ್ಸ್ ಮಾಡಿ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.


Ads on article

Advertise in articles 1

advertising articles 2

Advertise under the article