ಬೆಳಗಾವಿ : ಅಥಣಿ ನಗರದಲ್ಲಿ ನಡುರಸ್ತೆಯಲ್ಲೇ ಸೈನಿಕನಿಗೆ ಥಳಿಸಿದ ಪೊಲೀಸರು ; ಮಾಜಿ ಸೈನಿಕರಿಂದ ಠಾಣೆಗೆ ಮುತ್ತಿಗೆ,  ಕ್ಷಮೆಯಾಚಿಸಿದ ಪೊಲೀಸರು.

ಬೆಳಗಾವಿ : ಅಥಣಿ ನಗರದಲ್ಲಿ ನಡುರಸ್ತೆಯಲ್ಲೇ ಸೈನಿಕನಿಗೆ ಥಳಿಸಿದ ಪೊಲೀಸರು ; ಮಾಜಿ ಸೈನಿಕರಿಂದ ಠಾಣೆಗೆ ಮುತ್ತಿಗೆ, ಕ್ಷಮೆಯಾಚಿಸಿದ ಪೊಲೀಸರು.

ಬೆಳಗಾವಿ: ಅಥಣಿ ಪಟ್ಟಣದ ಶಿವಯೋಗಿ (ಹಲ್ಯಾಳ) ವೃತ್ತದಲ್ಲಿ ರಸ್ತೆ ಬದಿ ನಿಂತಿದ್ದ ಸೈನಿಕನಿಗೆ ಐದಾರು ಪೊಲೀಸರು ಸೇರಿ ಹಲ್ಲೆಗೈದ ಘಟನೆ ನಡೆದಿದೆ. ಇದರ ಬೆನ್ನಲ್ಲೇ ಘಟನೆ ಖಂಡಿಸಿ ಮಾಜಿ ಸೈನಿಕರು ಸೇರಿ ಠಾಣೆಗೆ ಮುತ್ತಿಗೆ ಹಾಕಿದ್ದಾರೆ. 

ವಾಹನದೊಂದಿಗೆ ನಿಂತಿದ್ದ ತನಗೆ ಪೊಲೀಸರು ಏಕವಚನದಲ್ಲಿ ಮಾತನಾಡಿದ್ದರಿಂದ ಸಿಟ್ಟಾದ ಸೈನಿಕ, ತಾನೂ ದೇಶ ಸೇವೆ ಮಾಡೋನು, ಗೌರವ ಕೊಟ್ಟು ಮಾತನಾಡಿ' ಎಂದು ಹೇಳಿದ್ದರು. ಇದರ ಬಗ್ಗೆ ಮಾತಿನ ಚಕಮಕಿ ನಡೆದಿದ್ದು ಪೊಲೀಸರು ಬಳಿಕ ಸೈನಿಕನಿಗೆ ನಡುರಸ್ತೆಯಲ್ಲಿಯೇ ಥಳಿಸಿದ್ದಾರೆ. ಘಟನೆ ಬಳಿಕ ಮಾಜಿ ಸೈನಿಕರ ಸಂಘದ ಸದಸ್ಯರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದು ಪೋಲಿಸರು ಬಹಿರಂಗ ಕ್ಷಮೆ ಯಾಚಿಸಿದ ಬಳಿಕ ಮುತ್ತಿಗೆ ಹಿಂಪಡೆದರು. 

ಹಲ್ಲೆಗೊಳಗಾದ ಯೋಧ ಮಲ್ಲಿಕಾರ್ಜುನ ಪಾಟೀಲ ಮಾತನಾಡಿ, ' ಗೌರವದಿಂದ ಮಾತನಾಡಿ ಎಂದು ಹೇಳಿದ್ದಕ್ಕೆ ಅವಾಚ್ಯವಾಗಿ ನಿಂದಿಸಿ ಐದಾರು ಪೊಲೀಸರು ಸೇರಿ ನಡು ರಸ್ತೆಯಲ್ಲಿ ಹಲ್ಲೆ ಮಾಡಿದ್ದಾರೆ. ಬಳಿಕ ಠಾಣೆಗೆ ಕರೆತಂದು ಅಲ್ಲಿಯೂ ಅವಾಚ್ಯವಾಗಿ ನಿಂದಿಸಿದ್ದಾರೆ. ನಾವು ಸಹ ದೇಶ ಸೇವೆ ಮಾಡುತ್ತೇವೆ. ಆದರೆ ನಮಗೆ ಸ್ಥಳೀಯವಾಗಿ ಈ ತರಹ ಅಗೌರವ ತೋರಿದ್ದು ಬೇಸರ ತಂದಿದೆ' ಎಂದು ಹೇಳಿದರು. 

ಮಾಜಿ ಸೈನಿಕ‌ ಗುರಪ್ಪ ಮಗದುಮ್ ಮಾತನಾಡಿ, 'ವೀರ ಮರಣ ಹೊಂದಿದ ಯೋಧರಿಗೆ ಇಡೀ ದೇಶದಲ್ಲಿಯೇ ಸಾಕಷ್ಟು ಗೌರವ ನೀಡುತ್ತಿದ್ದಾರೆ. ಆದರೆ ಸ್ಥಳೀಯವಾಗಿ ಪೋಲಿಸರು ಈ ತರಹ ವರ್ತನೆ ಮಾಡಿದ್ದು ಖಂಡನಿಯ. ಇದನ್ನು ಖಂಡಿಸಿ ನಾವು ಪೋಲಿಸ್ ಠಾಣೆಗೆ ಮುತ್ತಿಗೆ ಹಾಕಲು ಹೋಗಿದ್ದೆವು, ಆದರೆ ಪೋಲಿಸರು ಬಹಿರಂಗವಾಗಿ ಕ್ಷಮೆ ಕೇಳಿದ್ದಕ್ಕೆ ಮುತ್ತಿಗೆ ಹಿಂಪಡೆದಿದ್ದೇವೆ ಎಂದು ಹೇಳಿದರು.

Ads on article

Advertise in articles 1

advertising articles 2

Advertise under the article