ಉಡುಪಿ :ಉಡುಪಿಯಿಂದ ಮಹಾಕುಂಭಮೇಳಕ್ಕೆ ವಿಶೇಷ  ರೈಲಿನ ವ್ಯವಸ್ಥೆ;ಕೇವಲ 15 ನಿಮಿಷದಲ್ಲಿ ಎಲ್ಲಾ ಸೀಟ್ ಬುಕ್ಕಿಂಗ್. kumbhamela special train arrengment

ಉಡುಪಿ :ಉಡುಪಿಯಿಂದ ಮಹಾಕುಂಭಮೇಳಕ್ಕೆ ವಿಶೇಷ ರೈಲಿನ ವ್ಯವಸ್ಥೆ;ಕೇವಲ 15 ನಿಮಿಷದಲ್ಲಿ ಎಲ್ಲಾ ಸೀಟ್ ಬುಕ್ಕಿಂಗ್. kumbhamela special train arrengment


ಉಡುಪಿ : ಫೆಬ್ರವರಿ 17 ರಂದು ಉಡುಪಿಯಿಂದ ಪ್ರಯಾಗ್ ರಾಜ್ ಮಹಾಕುಂಭಮೇಳಕ್ಕೆ ತೆರಳುತ್ತಿರುವ ವಿಶೇಷ ರೈಲು ಕೇವಲ 15 ನಿಮಿಷದಲ್ಲಿ ಟಿಕೆಟ್ಫು ಬುಕ್ಕಿಂಗ್ ಆಗಿದೆ.

ಫೆಬ್ರವರಿ 17 ರಂದು ಮಧ್ಯಾಹ್ನಉಡುಪಿಯಿಂದ ಹೊರಡುವ ರೈಲು ಫೆಬ್ರವರಿ 19 ರಂದು ಪ್ರಯಾಗ್ ರಾಜ್ ತಲುಪಲಿದೆ. ಈ ಹಿನ್ನಲೆ ರೈಲು ಟಿಕೆಟ್ ಬುಕ್ಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಬೆಳಗ್ಗೆ 8 ಗಂಟೆಯಿಂದಲೇ ಇಂದ್ರಾಳಿ ರೈಲು ನಿಲ್ದಾಣ ಸಹಿತ ಜಿಲ್ಲೆಯ ವಿವಿಧ ರೈಲು ನಿಲ್ದಾಣಗಳಲ್ಲಿ ಮುಂಗಡ ಟಿಕೆಟ್ ಬುಕ್ಕಿಂಗ್‌ಗಾಗಿ ಯಾತ್ರಾರ್ಥಿಗಳು ಕಾದು ಕುಳಿತಿದ್ದರು. ಮಧ್ಯಾಹ್ನ 1 ಗಂಟೆಗೆ ಬುಕಿಂಗ್ ತೆರೆದು ಕೇವಲ 15 ನಿಮಿಷದಲ್ಲಿ ಎಲ್ಲಾ ಸೀಟ್ ಗಳು ಬರ್ತಿಯಾದವು, ಆದರೆ ರಿಟರ್ನ್ ಟಿಕೆಟ್ ಗೊಂದಲ ವುಂಟಾಗಿತ್ತು, ಅನಂತರ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಕೊಂಕಣ್ ರೈಲ್ವೇ ಅಧಿಕಾರಿಗಳು ದಿಲ್ಲಿಗೆ ನಿರಂತರ ಸಂಪರ್ಕ ಬೆಳೆಸಿದ ಫಲವಾಗಿ ರಾತ್ರಿ 8 ಗಂಟೆ ಸುಮಾರಿಗೆ ಬುಕ್ಕಿಂಗ್‌ಗೆ ಅವಕಾಶ ನೀಡಲಾಗಿದ್ದು, ಆ ವೇಳೆಗೆ ರೈಲು ನಿಲ್ದಾಣದ ಬುಕ್ಕಿಂಗ್ ಕೌಂಟರ್‌ಗಳು ಮುಚ್ಚಿದ್ದವು. ಹೀಗಾಗಿ ಆನ್‌ಲೈನ್‌ನಲ್ಲಿ ಮಾತ್ರ ಅವಕಾಶ ನೀಡಲಾಗಿತ್ತು. ಇದರಿಂದಲೂ ಒಂದಿಷ್ಟು ಮಂದಿ ಗೊಂದಲಕ್ಕೆ ಒಳಗಾಗಿದ್ದರು. ಪ್ರಯಾಗ್ ರಾಜ್‌ಗೆ ಹೋಗಲು ಮುಂಗಡ ಟಿಕೆಟ್ ಕಾದಿರಿಸಿದ್ದ ಹಲವರಿಗೆ ವಾಪಸ್ ಬರಲು ಟಿಕೆಟ್ ಸಿಕ್ಕಿರಲಿಲ್ಲ.

Ads on article

Advertise in articles 1

advertising articles 2

Advertise under the article