ದಕ್ಷಿಣಕನ್ನಡ: ತಂಗಿಯ ಗಂಡನ ಪಿಂಡ ಪ್ರದಾನಕ್ಕೆ ಬಂದಿದ್ದ ಮಹಿಳೆ ಸಮುದ್ರದಲ್ಲಿ ಮುಳುಗಿ ಸಾವು.

ದಕ್ಷಿಣಕನ್ನಡ: ತಂಗಿಯ ಗಂಡನ ಪಿಂಡ ಪ್ರದಾನಕ್ಕೆ ಬಂದಿದ್ದ ಮಹಿಳೆ ಸಮುದ್ರದಲ್ಲಿ ಮುಳುಗಿ ಸಾವು.

ಉಳ್ಳಾಲ: ತಂಗಿಯ ಗಂಡನ ಪಿಂಡ ಪ್ರದಾನ ವಿಧಿಯಲ್ಲಿ ಪಾಲ್ಗೊಳ್ಳಲು ಬಂದಿದ್ದ ಮಹಿಳೆಯೊಬ್ಬರು ಸಮುದ್ರ ಪಾಲಾಗಿ ಸಾವನ್ನಪ್ಪಿದ ಘಟನೆ ಸೋಮೇಶ್ವರ ಸಮುದ್ರ ತೀರದಲ್ಲಿ ಸೋಮವಾರ (ಡಿ.16) ಸಂಭವಿಸಿದೆ.

ದೇರೆಬೈಲ್ ನಿವಾಸಿ ಉಷಾ ಅವರ ತಂಗಿ ನಿಶಾ ಭಂಡಾರಿ ಅವರ ಗಂಡ ಕರುಣಾಕರ ಭಂಡಾರಿ ಎಂಬವರು ಕೆಲವು ದಿನಗಳ ಹಿಂದೆ ನಿಧನರಾಗಿದ್ದು, ಸೋಮವಾರ ಪಿಂಡ ಪ್ರದಾನ ವಿಧಿಯಲ್ಲಿ ಪಾಲ್ಗೊಳ್ಳಲು ಸಂಬಂಧಿಕರ ಜೊತೆಗೆ ಸೋಮೇಶ್ವರಕ್ಕೆ ಆಗಮಿಸಿದ್ದರು. ಪಿಂಡ ಪ್ರದಾನದ ಬಳಿಕ ಸಮುದ್ರ ದಲ್ಲಿ ಸ್ನಾನ ಪ್ರಕ್ರಿಯೆ ಮುಗಿಸುತ್ತಿದ್ದಾಗ ಸಂಬಂಧಿಕರು ನೋಡುತ್ತಿದ್ದಂತೆಯೇ ಕಾಲು ಜಾರಿ ಸಮುದ್ರ ಪಾಲಾಗಿದ್ದಾರೆ. ಸಹಾಯಕ್ಕಾಗಿ ಕೂಗಿದಾಗ ಸ್ಥಳೀಯರು ಸಮುದ್ರಕ್ಕೆ ಧುಮುಕಿದ್ದು, ಅವರನ್ನು ಸಮುದ್ರ ತಟಕ್ಕೆ ತರುವಷ್ಟರಲ್ಲಿ ಸಾವನ್ನಪ್ಪಿದ್ದಾರೆ.
ಉಷಾ ಅವರು ಏನ್.ಎಮ್.ಪಿ.ಟಿಯಲ್ಲಿ ನಲ್ವತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿ ಅಸಿಸ್ಟೆಂಟ್ ಸೆಕ್ರೆಟರಿ ಆಗಿ ನಿವೃತ್ತರಾಗಿದ್ದರು. ಮೃತರು ಪುತ್ರಿಯನ್ಬು ಅಗಲಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ದೇರಳಕಟ್ಟೆ ಕೆ. ಎಸ್. ಹೆಗ್ಡೆ ಆಸ್ಪತ್ರೆಗೆ ರವಾನಿಸಲಾಗಿದೆ.

Ads on article

Advertise in articles 1

advertising articles 2

Advertise under the article