ಮಂಗಳೂರು : ಗುಜರಾತ್‌ನಲ್ಲಿ ನಡೆದ ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿ ಮಂಗಳೂರಿನಿಂದ ದಿಲ್ಲಿಗೆ ಕಾಲ್ನಡಿಗೆ ಜಾಥಾ;ಸೂರತ್ ಸಮೀಪ ಟ್ರಕ್ ಢಿಕ್ಕಿ ಹೊಡೆದು ಸಾಮಾಜಿಕ ಹೋರಾಟಗಾರ ಮೂಸಾ ಶರೀಫ್ ಮೃತ್ಯು
Thursday, December 12, 2024
ಬೆಳ್ತಂಗಡಿ: ಗುಜರಾತ್‌ನಲ್ಲಿ ನಡೆದ ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿ ಮಂಗಳೂರಿನಿಂದ ದಿಲ್ಲಿಗೆ ಕಾಲ್ನಡಿಗೆ ಜಾಥಾ ಮಾಡುತ್ತಿದ್ದ ತಂಡದಲ್ಲಿ ಭಾಗಿಯಾಗಿದ್ದ ಚಾರ್ಮಾಡಿಯ ಮೂಸಾ ಕುಂಞಿ ಯಾನೆ ಶರೀಫ್ (47) ಸೂರತ್ ಸಮೀಪ ಟ್ರಕ್ ಢಿಕ್ಕಿ ಹೊಡೆದು ಮೃತಪಟ್ಟಿದ್ದಾರೆ. ಅವರು ಪತ್ನಿ ಮತ್ತು ಮೂವರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ.
ಢಿಕ್ಕಿ ಹೊಡೆದು ಟ್ರಕ್ ಪರಾರಿಯಾಗಿದೆ ಎಂದು ತಿಳಿದು ಬಂದಿದೆ. ಕೆ.ಆರ್.ಎಸ್. ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಸಾಮಾಜಿಕ ಹೋರಾಟಗಾರ ಮೂಸಾ ಶರೀಫ್ ಕರ್ನಾಟಕ ಸಾರಥಿಗಳ ಟ್ರೇಡ್ ಯೂನಿಯನ್ ಮುಖಂಡರು. ದೇಶದಲ್ಲಿ ನಡೆಯುತ್ತಿರುವ ಬೇಟಿ ಬಚಾವೋ ಬೇಟಿ ಪಡಾವೋ ಅಭಿಯಾನದ ಮಧ್ಯೆ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಗಳಿಗೆ ತ್ವರಿತ ಶಿಕ್ಷೆಗೆ ಆಗ್ರಹಿಸಿ ಪ್ರಧಾನ ಮಂತ್ರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಲು ಐವರ ತಂಡ ಮಂಗಳೂರಿನಿಂದ ದಿಲ್ಲಿಗೆ ಅ. 17 ರಂದು ಕಾಲ್ನಡಿಗೆ ಜಾಥಾ ಆರಂಭಿಸಿತ್ತು. ಇವರ ಜತೆ ನೌಫಲ್ ಅಬ್ಟಾಸ್, ಬಾಲಕೃಷ್ಣ, ಹಂಝ ಮತ್ತು ಪ್ರವೀಣ್ ಅವರಿದ್ದರು ಎಂದು ತಿಳಿದು ಬಂದಿದೆ.