ಪುತ್ತೂರು : ನಗರದ ಪರ್ಲಡ್ಕದಲ್ಲಿ ನಡೆದ ಭೀಕರ ರಸ್ತೆ ಅಪಘಾತ; ತಂದೆ ಮಗ ಸೇರಿ ಮೂವರ ದುರ್ಮರಣ.
Friday, December 27, 2024
ಪುತ್ತೂರು: ಇಂದು ಮುಂಜಾನೆ ಪುತ್ತೂರು ತಾಲೂಕಿನ ಪರ್ಲಡ್ಕದಲ್ಲಿ ಭೀಕರ ರಸ್ತೆ ಅಪಘಾತ ನಡೆದಿದ್ದು, ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಕಂದಕಕ್ಕೆ ಉರುಳಿ ಬಿದ್ದಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ತಂದೆ ಮಗ ಸೇರಿ ಮೂವರು ಸಾವನ್ನಪ್ಪಿದ್ದಾರೆ
ಮೃತರನ್ನು ಸುಳ್ಯ ಜಟ್ಟಿಪಳ್ಳ ನಿವಾಸಿಗಳಾದ ಅಣ್ಣು ನಾಯ್ಕ, ಅವರ ಮಗ ಚಿದಾನಂದ ನಾಯ್ಕ ಮತ್ತು ಪಕ್ಕದ ಮನೆಯ ರಮೇಶ್ ನಾಯ್ಕ ಎಂದು ಗುರುತಿಸಲಾಗಿದೆ. ಇವರು ಗೋಂದೋಳ್ ಪೂಜೆಗೆ ವಿಟ್ಲ ಸಮೀಪದ ಪುಣಚಕ್ಕೆ ನಿನ್ನೆ ರಾತ್ರಿ ಆಗಮಿಸಿದ್ದು ನಸುಕಿನಲ್ಲಿ ಹಿಂತಿರುಗಿದ್ದರು. 4.30ರ ವೇಳೆಗೆ ಪುಣಚದ ಬುಳೇರಿಕಟ್ಟೆಯಿಂದ ಒಳರಸ್ತೆಯಲ್ಲಿ ಬಂದು ಪುತ್ತೂರು ಬೈಪಾಸ್ ನಲ್ಲಿ ಹೆದ್ದಾರಿಗೆ ಸೇರುವಲ್ಲಿಯೇ ಅಪಘಾತಕ್ಕೀಡಾಗಿದೆ.


ನಿದ್ದೆ ಮಂಪರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಹೆಚ್ಚು ಆಳವಿಲ್ಲದ ರಸ್ತೆ ಬದಿಯ ಕಂದಕಕ್ಕೆ ಬಿದ್ದಿದ್ದು, ಸ್ಥಳದಲ್ಲೇ ಮೂವರು ಸಾವನಪ್ಪಿದ್ದಾರೆ. ನಸುಕಿನಲ್ಲಿ ಅಪಘಾತ ನಡೆದಿದ್ದರೂ, ಬೆಳಗ್ಗೆ 6 ಗಂಟೆ ವೇಳೆಗೆ ಘಟನೆ ಸ್ಥಳೀಯರಿಗೆ ತಿಳಿದುಬಂದಿತ್ತು. ಬಳಿಕ ಪೊಲೀಸರು ಮತ್ತು ಸ್ಥಳೀಯರು ಸೇರಿ ಕಾರನ್ನು ಎತ್ತಿದ್ದು ಅಡಿಯಲ್ಲಿ ಸಿಲುಕಿಕೊಂಡಿದ್ದವರನ್ನು ಆಸ್ಪತ್ರೆಗೆ ಒಯ್ದಿದ್ದಾರೆ. ಅಷ್ಟರಲ್ಲಿ ಮೂವರು ಕೂಡ ಸಾವನ್ನಪ್ಪಿದ್ದಾರೆ.