ಕೇರಳ :ಪಾಲಕ್ಕಾಡ್ -ರಸ್ತೆ ಬದಿ ನಿಂತಿದ್ದ ಶಾಲಾ ಮಕ್ಕಳ ಮೇಲೆ ಪಲ್ಟಿಯಾಗಿ ಬಿದ್ದ ಸಿಮೆಂಟ್ ಲಾರಿ – ನಾಲ್ಕು ಮಕ್ಕಳ ದುರ್ಮರಣ.

ಕೇರಳ :ಪಾಲಕ್ಕಾಡ್ -ರಸ್ತೆ ಬದಿ ನಿಂತಿದ್ದ ಶಾಲಾ ಮಕ್ಕಳ ಮೇಲೆ ಪಲ್ಟಿಯಾಗಿ ಬಿದ್ದ ಸಿಮೆಂಟ್ ಲಾರಿ – ನಾಲ್ಕು ಮಕ್ಕಳ ದುರ್ಮರಣ.

ಕೇರಳ : ಶಾಲೆಯಿಂದ ಮನೆಗೆ ತೆರಳಲು ಬಸ್ ಗಾಗಿ ರಸ್ತೆ ಬದಿ ನಿಂತಿದ್ದ ಶಾಲಾ ಮಕ್ಕಳ ಮೇಲೆ ಸಿಮೆಂಟ್ ತುಂಬಿದ್ದ ಲಾರಿಯೊಂದು ಪಲ್ಟಿಯಾದ ಪರಿಣಾಮ ನಾಲ್ವರು ಮಕ್ಕಳು ಸಾವನಪ್ಪಿದ ಘಟನೆ ಕೋಝಿಕ್ಕೋಡ್-ಪಾಲಕ್ಕಾಡ್ ರಾಷ್ಟ್ರೀಯ ಹೆದ್ದಾರಿಯ ಕಲ್ಲಡಿಕೋಡ್ ಪನಯಂಬಡ ಎಂಬಲ್ಲಿ ಈ ಘಟನೆ ನಡೆದಿದೆ.

ಮನ್ನಾರ್ಕಾಡ್ ಕಡೆಗೆ ಸಿಮೆಂಟ್ ಸಾಗಿಸುತ್ತಿದ್ದ ಲಾರಿಯೊಂದು ಪಲ್ಟಿಯಾಗಿದೆ. ಕರಿಂಬಾ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳಾದ ನಾಲ್ವರು ಬಾಲಕಿಯರು ಸಾವನ್ನಪ್ಪಿದ್ದಾರೆ. ಮೃತರನ್ನು ಇರ್ಫಾನಾ, ಮಿತಾ, ರಿದಾ ಮತ್ತು ಆಯೇಶಾ ಎಂದು ಗುರುತಿಸಲಾಗಿದೆ.

ಎಂಟನೇ ತರಗತಿಯ ವಿದ್ಯಾರ್ಥಿಗಳು ಮನೆಗೆ ಮರಳಲು ಬಸ್ ನಿಲ್ದಾಣದಲ್ಲಿ ನಿಂತಿದ್ದಾಗ ಸಂಜೆ 4:00 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ವೇಗವಾಗಿ ಬಂದ ಲಾರಿ ನಿಯಂತ್ರ ತಪ್ಪಿ ರಸ್ತೆ ಬದಿ ನಿಂತಿದ್ದ ವಿಧ್ಯಾರ್ಥಿಗಳ ಮೇಲೆ ಬಿದ್ದಿದೆ. ಮೂವರು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೂವರು ವಿದ್ಯಾರ್ಥಿಗಳ ಮೃತ ದೇಹಗಳು ತಚಂಪಾರ ಐಎಸ್‌ಎಎಫ್ ಆಸ್ಪತ್ರೆಯಲ್ಲಿದ್ದು, ಒಬ್ಬ ವಿದ್ಯಾರ್ಥಿಯ ಮೃತದೇಹ ಮನ್ನಾರ್ಕ್ಕಾಡ್ ಮದರ್ ಕೇರ್ ಆಸ್ಪತ್ರೆಯಲ್ಲಿದೆ. ಮಳೆಯ ರಭಸಕ್ಕೆ ಲಾರಿ ನಿಯಂತ್ರಣ ತಪ್ಪಿ ಪಲ್ಟಿಯಾಗಿರಬಹುದೆಂದು ಹೇಳಲಾಗಿದೆ. ಸ್ಥಳೀಯರು, ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ರಕ್ಷಣಾ ಕಾರ್ಯಾಚರಣೆ ನಡೆಸಿದರು.

Ads on article

Advertise in articles 1

advertising articles 2

Advertise under the article