ಬೆಂಗಳೂರು :ವರನಟಿ ಲೀಲಾವತಿಗೆ ಪುತ್ರ ನಟ ವಿನೋದ್ ರಾಜ್ ರಿಂದ ಸ್ಮಾರಕ, ದೇಗುಲ ನಿರ್ಮಾಣ! ಸಾಲು ಸಾಲು ಕಥೆ ಸಾರುತ್ತಿವೆ ವರನಟಿ ಭಾವ ಚಿತ್ರಗಳು!!!

ಬೆಂಗಳೂರು :ವರನಟಿ ಲೀಲಾವತಿಗೆ ಪುತ್ರ ನಟ ವಿನೋದ್ ರಾಜ್ ರಿಂದ ಸ್ಮಾರಕ, ದೇಗುಲ ನಿರ್ಮಾಣ! ಸಾಲು ಸಾಲು ಕಥೆ ಸಾರುತ್ತಿವೆ ವರನಟಿ ಭಾವ ಚಿತ್ರಗಳು!!!

ನೆಲಮಂಗಲ: ವರನಟಿ ಲೀಲಾವತಿ ಅವರು ನಮ್ಮನ್ನಗಲಿ ಒಂದು ವರ್ಷವಾಗಿದೆ. ಇನ್ನು ಎರಡು ದಿನಗಳು ಕಳೆದರೆ ಒಂದು ವರ್ಷದ ಕಾರ್ಯ ಕೂಡ ಮಾಡಬೇಕಿದೆ. ಅದಕ್ಕೂ ಮುನ್ನವೇ ಅಂದುಕೊಂಡಂತೆ ಪುತ್ರ ವಿನೋದ್ ರಾಜ್ ತಾಯಿಯ ಸ್ಮಾರಕವನ್ನು ಮಾಡಿ‌ ಮುಗಿಸಿದ್ದಾರೆ. ತಾಯಿಗಾಗಿ ಅದ್ಭುತವಾದ ಮಂದಿರ ಕಟ್ಟಿಸಿದ್ದಾರೆ.


ಸೋಲದೇವನಹಳ್ಳಿ ಸುತ್ತ ಮುತ್ತಲಿನ ಗ್ರಾಮಸ್ಥರಿಗೆ ಮಾತ್ರ ದೇಗುಲವದು. ಅಷ್ಟು ಅದ್ಭುತವಾಗಿದೆ. ಬಂಗಾರದ ಬರಹಗಳ ಮೂಲಕ ವರನಟಿ ಅವರ ಸ್ಮಾರಕ ಅಭಿಮಾನಿಗಳನ್ನು ಸ್ವಾಗತಿಸುತ್ತೆ. ಮಂದಿರದ ಸುತ್ತಲೂ ದೀಪಾಲಂಕಾರ ಮಾಡಲಾಗಿದೆ. ಲೀಲಾವತಿ ಅಮ್ಮನವರು ಮಾಡಿದ ಸಿನಿಮಾಗಳ ಪ್ರಮುಖ ಫೋಟೋಗಳನ್ನು ಸ್ಮಾರಕದ ಗೋಡೆಗಳಿಗೆ ಹಾಕಲಾಗಿದೆ. ಸುಮಾರು 63ಕ್ಕೂ ಹೆಚ್ಚು ಫೋಟೋಗಳು ನೋಡಗರನ್ನು ಬೆರಗುಗೊಳಿಸುತ್ತೆ. ಲೀಲಾವತಿ ಅಮ್ಮನವರ ಸ್ಮಾರಕವೂ ಕೂಡ ವಿಶೇಷವಾದ ಮಾರ್ಬಲ್​ಗಳನ್ನು ಬಳಸಿ ನಿರ್ಮಾಣ ಮಾಡಲಾಗಿದೆ. ಸುತ್ತಲೂ ಮಂಟಪಗಳನ್ನು ನಿಲ್ಲಿಸಲಾಗಿದೆ‌
ಲೀಲಾವತಿ ಅಮ್ಮನವರ ಸ್ಮಾರಕದ ಉದ್ಘಾಟನೆಗೆ ರಾಜ‌ಕಾರಣಿಗಳು ಸೇರಿದಂತೆ ಸಿನಿಮಾ ರಂಗದ ಹಲವು ಹಿರಿಯ ನಟರು ಆಗಮಿಸಿದ್ದರು. ಆಹಾರ ಸಚಿವ ಹೆಚ್​. ಮುನಿಯಪ್ಪ, ಒಕ್ಕಲಿಗ ಮಠದ ನಿರ್ಮಲಾನಂದ ಶ್ರೀಗಳು ಕೂಡ ಸ್ಮಾರಕಕ್ಕೆ ಭೇಟಿ ಕೊಟ್ಟು ಉದ್ಘಾಟನೆ ಮಾಡಿದ್ದಾರೆ. ಇದೇ ವೇಳೆ ಗಿರಿಜಾ ಲೋಕೇಶ್ ಅವರು ಲೀಲಾವತಿ ಹಾಗೂ ವಿನೋದ್ ರಾಜ್ ಅವರ ಸರಳ ಜೀವನದ ಬಗ್ಗೆ ಹಾಡಿ ಹೊಗಳಿದರು.

Ads on article

Advertise in articles 1

advertising articles 2

Advertise under the article