ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೆಸರಲ್ಲಿ ಸಲ್ಮಾನ್‌ಗೆ ಬೆದರಿಕೆ ಹಾಕಿದ್ದ ಆರೋಪಿ ತುಮಕೂರಲ್ಲಿ ಬಂಧನ

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೆಸರಲ್ಲಿ ಸಲ್ಮಾನ್‌ಗೆ ಬೆದರಿಕೆ ಹಾಕಿದ್ದ ಆರೋಪಿ ತುಮಕೂರಲ್ಲಿ ಬಂಧನ


ತುಮಕೂರು: ಲಾರೆನ್ಸ್‌ ಬಿಷ್ಣೋಯ್ ಗ್ಯಾಂಗ್‌ ಹೆಸರಲ್ಲಿ ಬಾಲಿವುಡ್‌ ನಟ ಸಲ್ಮಾನ್ ಖಾನ್‌ಗೆ ಬೆದರಿಕೆ ಹಾಕಿದ್ದ ಆರೋಪಿಯನ್ನು ತುಮಕೂರಿನಲ್ಲಿ ಪೋಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ವಿಕ್ರಮ್‌ ಎಂದು ಗುರುತಿಸಲಾಗಿದೆ. ಆರೋಪಿಯು ಸಲ್ಮಾನ್‌ ಖಾನ್ 5 ಕೋಟಿ ರೂ. ಹಣ ನೀಡಬೇಕು ಮತ್ತು ದೇವಾಲಯಕ್ಕೆ ಬಂದು ಕ್ಷಮೆ ಕೋರಬೇಕು ಎಂದು ಮುಂಬೈ ಪೊಲೀಸರಿಗೆ ಮೆಸೇಜ್‌ ಕಳುಹಿಸಿದ್ದ.

ಜೀವಂತವಾಗಿರಲು ಬಯಸಿದರೆ ದೇವಸ್ಥಾನದಲ್ಲಿ ಕ್ಷಮೆಯಾಚಿಸಿ ಇಲ್ಲವೇ 5 ಕೋಟಿ ಹಣ ಕೊಡಿ ಎಂದು ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ಗೆ ಮತ್ತೆ ಬಿಷ್ಣೋಯ್‌ ಗ್ಯಾಂಗ್‌ ಹೆಸರಿಂದ ಬೆದರಿಕೆ ಬಂದಿತ್ತು. ಆರೋಪಿ ಮುಂಬೈ ಪೊಲೀಸರಿಗೆ ವಾಟ್ಸಪ್‌ ಸಂದೇಶ ಕಳುಹಿಸಿದ್ದ. ಒಂದು ವಾರದಲ್ಲಿ ಸಲ್ಮಾನ್ ಖಾನ್‌ಗೆ ಬಂದ ಎರಡನೇ ಕೊಲೆ ಬೆದರಿಕೆ ಇದಾಗಿದೆ.

ಕಳೆದ ವಾರ, ಅ.30 ರಂದು ಮುಂಬೈ ಸಂಚಾರ ನಿಯಂತ್ರಣವು ಸಲ್ಮಾನ್ ಖಾನ್ ವಿರುದ್ಧ ಇದೇ ರೀತಿಯ ಬೆದರಿಕೆಯನ್ನು ಸ್ವೀಕರಿಸಿತ್ತು. 2 ಕೋಟಿಗೆ ಬೇಡಿಕೆಯಿಡಲಾಗಿತ್ತು. ಈ ಸಂಬಂಧ ಬಾಂದ್ರಾ ಪೂರ್ವದ ನಿವಾಸಿ ಅಜಮ್ ಮೊಹಮ್ಮದ್ ಮುಸ್ತಫಾ ಎಂಬಾತನನ್ನು ತಕ್ಷಣವೇ ಬಂಧಿಸಲಾಗಿತ್ತು.

Ads on article

Advertise in articles 1

advertising articles 2

Advertise under the article