ಆಂಧ್ರ :ಬಿಸಿ ಬಿಸಿ ಮಸಾಲೆ ದೋಸೆ ತಿನ್ನುತ್ತಲೇ ಹೋಟೆಲ್ನಲ್ಲಿ ಪ್ರಾಣ ಬಿಟ್ಟ ವ್ಯಕ್ತಿ! ತೆಲಂಗಾಣದ ನಾಗರ್ಕರ್ನೂಲ್ ಜಿಲ್ಲೆಯಲ್ಲಿ ನಡೆದ ದುರಂತ
Thursday, October 24, 2024
ತೆಲಂಗಾಣ :ಇಷ್ಟವಾದ ಮಸಾಲೆ ತಿನ್ನುತ್ತಿರುವಾಗಲೇ ವ್ಯಕ್ತಿಯೊಬ್ಬರು ಪ್ರಾಣ ಬಿಟ್ಟ ಘಟನೆ ತೆಲಂಗಾಣದ ನಾಗರ್ಕರ್ನೂಲ್ನಲ್ಲಿ ನಡೆದಿದೆ.
ಮಸಾಲಾ ದೋಸೆ ತಿಂದು ಸಾವಿಗೀಡಾದ ವ್ಯಕ್ತಿ ಯನ್ನು ತೆಲಂಗಾಣದ ನಾಗರ್ಕರ್ನೂಲ್ನ ಸುಭಾಷ್ ನಗರದ ವೆಂಕಟಯ್ಯ ಎಂದು ಗುರುತಿಸಲಾಗಿದೆ. ಹೋಟೆಲ್ಗೆ ಬಂದಿದ್ದ ವೆಂಕಟಯ್ಯ ತಿನ್ನಲು ಮಸಾಲ್ ದೋಸೆ ಆರ್ಡರ್ ಮಾಡಿದ್ದಾರೆ. ರುಚಿ ರುಚಿಯಾದ ಮಸಾಲೆ ದೋಸೆ ತಿನ್ನುವಾಗ ದೋಸೆ ಗಂಟಲಲ್ಲಿ ಸಿಕ್ಕಿಕೊಂಡಿದ್ದರಿಂದ ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ.
ದೋಸೆ ತಿನ್ನುವಾಗ ಅದು ಗಂಟಲಲ್ಲಿ ಸಿಕ್ಕಿಕೊಂಡಾಗ ನೀರು ಕುಡಿದು ನಿರಾಳರಾಗಬೇಕೆಂದು ವೆಂಕಟಯ್ಯ ಸಾಕಷ್ಟು ಪ್ರಯತ್ನಪಟ್ಟಿದ್ದಾರೆ. ಅಷ್ಟರಲ್ಲಿ ಉಸಿರುಕಟ್ಟಿಕೊಂಡಿದೆ. ಏನೇ ಪ್ರಯತ್ನ ಪಟ್ಟರೂ ಕೂಡ ವೆಂಕಟಯ್ಯ ಬದುಕುಳಿಯಲು ಸಾಧ್ಯವಾಗಲಿಲ್ಲ. ಅವರಿಷ್ಟದ ದೋಸೆಯೇ ಅವರಿಗೆ ಮೃತ್ಯುವಾಗಿ ಪರಿಣಮಿಸಿದೆ. ಅಕ್ಕಪಕ್ಕದಲ್ಲಿದ್ದವರು ಸಹಾಯಕ್ಕೆ ಬರುವಷ್ಟರಲ್ಲಿ ವೆಂಕಟಯ್ಯ ಪ್ರಾಣಪಕ್ಷಿ ಹಾರಿ ಹೋಗಿದೆ.
ವರದಿಗಳು ಹೇಳುವ ಪ್ರಕಾರ ವೆಂಕಟಯ್ಯ ಮಸಾಲೆ ದೋಸೆ ತಿನ್ನೋಕೆ ಬರುವ ಮೊದಲು ಮದ್ಯಪಾನ ಮಾಡಿ ಬಂದಿದ್ದರು ಅಂತಲೂ ಹೇಳಲಾಗುತ್ತಿದೆ. ಮೃತಪಟ್ಟ ವೆಂಕಟಯ್ಯಗೆ ಪತ್ನಿ ಹಾಗೂ ಮೂವರು ಮಕ್ಕಳು ಇದ್ದಾರೆ ಎಂದು ತಿಳಿದು ಬಂದಿದೆ.