ಕರ್ನಾಟಕ :ಗೋಲ್ಗಪ್ಪ ಬ್ಯಾನ್ ಆಗಲಿದೆಯಾ? ಕಠಿಣ ಕ್ರಮಕ್ಕೆ ಮುಂದಾದ ಕರ್ನಾಟಕ ಆಹಾರ ಇಲಾಖೆ.
Monday, October 28, 2024
ಬೆಂಗಳೂರು: ಸಂಜೆ ಟೈಂನಲ್ಲಿ ಔಟಿಂಗ್ ಹೋಗಿ ಫ್ರೆಂಡ್ಸ್ ಜೊತೆ ಹರಟೆ ಹೊಡೆದು ಒಂದು ಪ್ಲೇಟ್ ಗೋಲ್ ಗಪ್ಪಾ ತಿಂದು ಬರುವ ಯುವಕ-ಯುವತಿಯರಿಗೆ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ಕೆಲವು ಭಾಗಗಳಲ್ಲಿ ಗೋಲ್ ಗಪ್ಪಾದ ಟೇಸ್ಟ್ ಹೆಚ್ಚಿಸಲು, ಆರೋಗ್ಯಕ್ಕೆ ಹಾನಿಕಾರಕ ವಸ್ತುಗಳನ್ನು ಬಳಸಲಾಗುತ್ತಿದೆ ಎಂಬ ದೂರುಗಳು ಕೇಳಿಬಂದಿದ್ದವು. ಈ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಕರ್ನಾಟಕ ಆಹಾರ ಇಲಾಖೆ, ಗೋಲ್ ಗಪ್ಪ ಪೂರಿ ತಯಾರಿಕಾ ಘಟಕಗಳ ಮೇಲೆ ಆಹಾರ ಇಲಾಖೆ ಹದ್ದಿನ ಕಣ್ಣಿಟ್ಟಿದೆ.
ಗೋಲ್ ಗಪ್ಪವನ್ನ ಪರೀಕ್ಷೆಗೆ ಒಳಪಡಿಸ್ತಿದ್ದು, ಬೆಂಗಳೂರಲ್ಲಿ ರ್ಯಾಂಡಮ್ ಆಗಿ ಸ್ಯಾಂಪಲ್ಸ್ ಸಂಗ್ರಹ ಮಾಡಲಾಗುತ್ತಿದೆ. ರಾಜ್ಯಾದ್ಯಂತ ಒಟ್ಟು 200ಕ್ಕೂ ಹೆಚ್ಚು ಸ್ಯಾಂಪಲ್ಸ್ ಸಂಗ್ರಹ ಮಾಡಿ ಮಾಹಿತಿ ಕೆಲ ಹಾಕಲಾಗುತ್ತಿದೆ. ಗೋಲ್ ಗಪ್ಪಗೆ ಬಳಸುವ ಪೂರಿ ಹೇಗೆ ತಯಾರು ಮಾಡ್ತಾರೆ? ಅದಕ್ಕೆ ಏನೆಲ್ಲಾ ಪದಾರ್ಥ ಹಾಕಲಾಗುತ್ತದೆ? ಇದ್ರಿಂದ ಏನೆಲ್ಲಾ ಪರಿಣಾಮ ಬೀರಲಿದೆ ಎಂಬುವುದನ್ನು ತಿಳಿಯಲು ಆಹಾರ ಇಲಾಖೆ ಮುಂದಾಗಿದೆ. ಈ ಹಿನ್ನೆಲೆ ಕಳೆದ ಎರಡು ದಿನದಿಂದ ತಯಾರಿಕಾ ಘಟಕದ ಮೇಲೆ ದಾಳಿ ನಡೆಸುತ್ತಿದ್ದು, ರಾಜ್ಯಾದ್ಯಂತ ಗೋಲ್ ಗಪ್ಪ ಬ್ಯಾನ್ ಆಗಲಿದೆಯಾ ಎಂಬ ಅನುಮಾನ ಶುರುವಾಗಿದೆ.