ಉಡುಪಿ: ಜಿಂಕೆ ಮಾಂಸ ಸಾಗಾಟ; ಆರೋಪಿಗೆ ನ್ಯಾಯಾಂಗ ಬಂಧನ.
Wednesday, October 30, 2024
ಕುಂದಾಪುರ: ಬೈಕಿನಲ್ಲಿ ಜಿಂಕೆ ಮಾಂಸ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಅರಣ್ಯ ಇಲಾಖೆ ಬಂಧಿಸಿದ್ದು ಇಬ್ಬರು ಪರಾರಿಯಾಗಿದ್ದಾರೆ.
ಬಂಧಿತ ಕೊಡ್ಲಾಡಿ ಗ್ರಾಮದ ಜಗದೀಶ ಮೇಸ್ತ (49)ನಿಗೆ ಮಂಗಳವಾರ ನ್ಯಾಯಾಲಯ ನ.8ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಕೊಡ್ಲಾಡಿ ಗ್ರಾಮದ ಕೊಳಲಿಯಲ್ಲಿ ಗಸ್ತು ತಿರುಗುತ್ತಿದ್ದ ಅರಣ್ಯ ಇಲಾಖೆ ಸಿಬಂದಿಗೆ ಬೇಟೆಯಾಡಿದ ಜಿಂಕೆಯ ಮಾಂಸವನ್ನು ಬೈಕಿನಲ್ಲಿ ಸಾಗಾಟ ಮಾಡುತ್ತಿದ್ದ ಆರೋಪಿ ಸಿಕ್ಕಿಬಿದ್ದಿದ್ದು ಜತೆಗಿದ್ದ ಇಬ್ಬರು ಪರಾರಿಯಾಗಿದ್ದಾರೆ. ಬಂಧಿತನಿಂದ 23 ಕೆಜಿ ಜಿಂಕೆ ಮಾಂಸ, ಬೈಕ್, ಚೂರಿ, ಗನ್ ಪೌಡರ್ ವಶಪಡಿಸಿಕೊಳ್ಳಲಾಗಿದೆ.
ಡಿಎಫ್‌ಒ ಗಣಪತಿ, ಎಸಿಎಫ್ ಪ್ರಕಾಶ್ ಪೂಜಾರಿ ಮಾರ್ಗದರ್ಶನದಲ್ಲಿ, ವಲಯ ಅರಣ್ಯಾಧಿಕಾರಿ ರಾಘವೇಂದ್ರ ನಾಯ್ಕ, ಉಪ ವಲಯ ಅರಣ್ಯಾಧಿಕಾರಿಗಳಾದ ನಿಂಗಪ್ಪ, ಗುರುರಾಜ, ಸುನಿಲ್, ಶರತ್, ವಿನಯ್, ಅರಣ್ಯ ರಕ್ಷಕರಾದ ಗಂಗಾಧರ, ಅಶೋಕ, ಸುನಿಲ್, ತಿಮ್ಮಪ್ಪ ಕಾರ್ಯಾಚರಣೆ ನಡೆಸಿದ್ದರು. ಸರಕಾರದ ಪರ ಸಹಾಯಕ ಸರಕಾರಿ ಅಭಿಯೋಜಕ ಉದಯ ಕುಮಾರ್ ವಾದಿಸಿದ್ದರು.