ದಕ್ಷಿಣ ಕನ್ನಡ: ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಸ್ಲೀಪರ್ ಬಸ್​ ಗುಂಡ್ಯ ಹೊಳೆಗೆ  ಬಿದ್ದು ದುರ್ಘಟನೆ

ದಕ್ಷಿಣ ಕನ್ನಡ: ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಸ್ಲೀಪರ್ ಬಸ್​ ಗುಂಡ್ಯ ಹೊಳೆಗೆ ಬಿದ್ದು ದುರ್ಘಟನೆ

ದಕ್ಷಿಣ ಕನ್ನಡ: ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಸ್ಲೀಪರ್ ಬಸ್​
ಗುಂಡ್ಯ ಹೊಳೆಗೆ  ಬಿದ್ದ ದುರ್ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಯಾಡಿ ಲಾವತ್ತಡ್ಕ ಎಂಬಲ್ಲಿ ನಡೆದಿದೆ. ಶುಕ್ರವಾರ ತಡರಾತ್ರಿ 12 ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ಬಸ್​​ ನದಿಗೆ ಬಿದ್ದ ರಭಸಕ್ಕೆ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಚಾಲಕ ಭರತ್ (28) ಮೃತ ಚಾಲಕ. ಈ ಬಸ್ ಗುರುವಾರ ಬೆಂಗಳೂರಿನಿಂದ ಪ್ರಯಾಣಿಕರನ್ನು ಗೋಕರ್ಣದಲ್ಲಿ ಇಳಿಸಿ, ನಿನ್ನೆ ಕುಕ್ಕೆಸುಬ್ರಹ್ಮಣ್ಯಕ್ಕೆ ಆಗಮಿಸುತ್ತಿತ್ತು. ಇಲ್ಲಿಂದ ಬೆಂಗಳೂರಿಗೆ ಪ್ರಯಾಣಿಕರನ್ನು ಪಿಕ್-ಅಪ್ ಮಾಡಲು ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಗೋಕರ್ಣದಿಂದ  ವಾಪಾಸ್ ಬರುವಾಗ ಚಾಲಕ ಮತ್ತು ಸಹಚಾಲಕ ಮಾತ್ರ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದು, ಯಾವುದೇ ಪ್ರಯಾಣಿಕರು ಇಲ್ಲದ ಕಾರಣ  ಸಾವು - ನೋವು ಸಂಭವಿಸಿಲ್ಲ. ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article