ಮಂಗಳೂರು:  ಯೆನೆಪೋಯ ವಿಶ್ವವಿದ್ಯಾಲಯದ ವೈದ್ಯಕೀಯ ಕಾಲೇಜಿನ ರಜತ ವರ್ಷಾಚರಣೆ; 25 ತಾಸುಗಳ ಯೋಗ ಪ್ರದರ್ಶನ ಗೋಲ್ಡನ್ ಬುಕ್ ಆಫ್ ವರ್ಲ್ಡ್‌ ರೆಕಾರ್ಡ್ಸ್‌ಗೆ ಸೇರ್ಪಡೆ.

ಮಂಗಳೂರು: ಯೆನೆಪೋಯ ವಿಶ್ವವಿದ್ಯಾಲಯದ ವೈದ್ಯಕೀಯ ಕಾಲೇಜಿನ ರಜತ ವರ್ಷಾಚರಣೆ; 25 ತಾಸುಗಳ ಯೋಗ ಪ್ರದರ್ಶನ ಗೋಲ್ಡನ್ ಬುಕ್ ಆಫ್ ವರ್ಲ್ಡ್‌ ರೆಕಾರ್ಡ್ಸ್‌ಗೆ ಸೇರ್ಪಡೆ.

ಮಂಗಳೂರು: ಇಲ್ಲಿನ ಯೆನೆಪೋಯ ಪರಿಗಣಿತ ವಿಶ್ವವಿದ್ಯಾಲಯದ ವೈದ್ಯಕೀಯ ಕಾಲೇಜಿನ ರಜತ ವರ್ಷಾಚರಣೆ ಸಂದರ್ಭದಲ್ಲಿ ಆಯೋಜಿಸಿದ್ದ 25 ತಾಸುಗಳ ಯೋಗ ಪ್ರದರ್ಶನವು ಗೋಲ್ಡನ್ ಬುಕ್ ಆಫ್ ವರ್ಲ್ಡ್‌ ರೆಕಾರ್ಡ್ಸ್‌ಗೆ ಸೇರಿದೆ. ‌

ದೇರಳಕಟ್ಟೆಯ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಸೋಮವಾರ ಬೆಳಿಗ್ಗೆ 9 ಗಂಟೆಗೆ ಪ್ರಾರಂಭವಾದ ಯೋಗ ಪ್ರದರ್ಶನವು ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಮುಕ್ತಾಯಗೊಂಡಿತು. ಯೆನೆಪೋಯ ವೈದ್ಯಕೀಯ ಕಾಲೇಜಿನ ವಿವಿಧ ವಿಭಾಗಗಳ ವಿದ್ಯಾರ್ಥಿಗಳು, ಆಸ್ಪತ್ರೆಯ ವೈದ್ಯರು, ಸಿಬ್ಬಂದಿ, ನಗರ ಬೇರೆ ಬೇರೆ ಆರು ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿ 3,658 ಜನರು ಭಾಗವಹಿಸಿದ್ದರು.

ಒಂದೂವರೆ ತಾಸಿನ ಒಂದು ಅವಧಿಯಂತೆ ಒಟ್ಟು 17 ಬ್ಯಾಚ್‌ನಲ್ಲಿ ಯೋಗ ಪ್ರದರ್ಶನ ನಡೆಯಿತು. ಮೊದಲ ಅರ್ಧ ತಾಸನ್ನು ಯೋಗ ಸಿದ್ಧಾಂತದ ಕುರಿತ ತರಗತಿಗೆ ಹಾಗೂ ನಂತರದ ಒಂದು ತಾಸನ್ನು ಯೋಗ, ಧ್ಯಾನ, ಪ್ರಣಾಯಾಮಕ್ಕೆ ಮೀಸಲಿಡಲಾಗಿತ್ತು. ಯೋಗ ಸಿದ್ಧಾಂತದಲ್ಲಿ ಯೋಗದ ಪರಿಚಯ, ಇತಿಹಾಸ, ದಿನನಿತ್ಯದಲ್ಲಿ ಅಷ್ಟಾಂಗ ಯೋಗದ ಪಾತ್ರ, ನಿತ್ಯದಲ್ಲಿ ನಿಯಮದ ಪಾತ್ರ, ಜೀವನ ಚೈತನ್ಯವಾಗಿ ಪ್ರಾಣಾಯಾಮ, ಕರ್ಮಯೋಗ, ಭಕ್ತಿಯೋಗ, ಜ್ಞಾನಯೋಗ ಹೀಗೆ 17 ವಿಷಯಗಳ ಬಗ್ಗೆ ತಿಳಿಸಲಾಯಿತು. ನಂತರ 16 ಯೋಗಾಸನ, ಪ್ರಾಣಾಯಾಮ, ವಿಶ್ರಾಂತಿಕ್ರಮ, ಧ್ಯಾನದ ತರಬೇತಿ ನೀಡಲಾಯಿತು.
ಯೋಗಪಟು ಕುಶಾಲಪ್ಪ ಗೌಡ ಅವರು ಏಕೈಕ ಗುರುವಾಗಿ ಇಡೀ 25 ತಾಸು ತರಗತಿ ಹಾಗೂ ಯೋಗ ಪಾಠ ಹೇಳಿಕೊಟ್ಟರು.

‘ಈ ಹಿಂದೆ ನಿರಂತರ 18 ತಾಸು ಯೋಗ ಪ್ರದರ್ಶನ ನೀಡಿದ್ದ ಅನುಭವ ಇತ್ತು. ಇದೇ ಮೊದಲ ಬಾರಿ 25 ತಾಸು ನಿದ್ದೆ, ವಿಶ್ರಾಂತಿ ಇಲ್ಲದೆ ಯೋಗ ಪ್ರದರ್ಶನ ನೀಡಿದ್ದೇನೆ. ಪ್ರತಿ ಬ್ಯಾಚ್ ನಡುವಿನ ಐದು ನಿಮಿಷದ ಬಿಡುವಿನಲ್ಲಿ ಮೂರು ಬಾರಿ ಮಾತ್ರ ದ್ರವ ಆಹಾರ ಸೇವಿಸಿದ್ದೇನೆ. ಸಾಧನೆಯ ಹಂಬಲವಿದ್ದರೆ ಒಬ್ಬ ವ್ಯಕ್ತಿ ಗಮ್ಯ ತಲುಪಬಹುದು ಎಂಬುದಕ್ಕೆ ಇದು ಸಾಕ್ಷಿ. ನಿರಂತರ 25 ತಾಸು ಪ್ರದರ್ಶನ ಹಾಗೂ ಗರಿಷ್ಠ ಸಂಖ್ಯೆಯ ವೈದ್ಯಕೀಯ ಸಿಬ್ಬಂದಿ ಯೋಗದಲ್ಲಿ ಭಾಗವಹಿಸಿದ್ದು ಎರಡು ವಿಶ್ವ ದಾಖಲೆ ನಿರ್ಮಿಸಿದೆ. ಗೋಲ್ಡನ್ ಬುಕ್‌ ಆಫ್ ರೆಕಾರ್ಡ್ಸ್‌ನ ಏಷ್ಯಾದ ಮುಖ್ಯಸ್ಥ ಡಾ. ಮನಿಷ್ ವಿಷ್ಣೋಯಿ ಅವರು ಇಡೀ ಪ್ರದರ್ಶನವನ್ನು ವೀಕ್ಷಿಸಿ, ಕೊನೆಯಲ್ಲಿ ದಾಖಲೆಯ ಪ್ರಮಾಣಪತ್ರ ಹಸ್ತಾಂತರಿಸಿದರು’ ಎಂದು ಕುಶಾಲಪ್ಪ ಗೌಡ  ತಿಳಿಸಿದರು.

Ads on article

Advertise in articles 1

advertising articles 2

Advertise under the article