ಭೋಜೆಗೌಡ, ಡಾ.ಧನಂಜಯ ಸರ್ಜಿ ಪರ ಪುತ್ತೂರಿನ ಶಾಲಾ ಕಾಲೇಜುಗಳಲ್ಲಿ ಬಿರುಸಿನ ಪ್ರಚಾರ

ಭೋಜೆಗೌಡ, ಡಾ.ಧನಂಜಯ ಸರ್ಜಿ ಪರ ಪುತ್ತೂರಿನ ಶಾಲಾ ಕಾಲೇಜುಗಳಲ್ಲಿ ಬಿರುಸಿನ ಪ್ರಚಾರ


ಪುತ್ತೂರು: ಎನ್.ಡಿ.ಎ ಮೈತ್ರಿಕೂಟದ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಎಸ್.ಎಲ್.ಭೋಜೆಗೌಡ ಹಾಗೂ ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಡಾ.ಧನಂಜಯ ಸರ್ಜಿಯವರ ಪರ ಪುತ್ತೂರಿನ ಶಾಲಾ ಕಾಲೇಜುಗಳಲ್ಲಿ ಬಿರುಸಿನ ಪ್ರಚಾರ ನಡೆಯಿತು.

ಪುತ್ತೂರಿನ ವಕೀಲರ ಸಂಘ, ವಿವೇಕಾನಂದ ಪಿಯು ಕಾಲೇಜು, ಪದವಿ ಕಾಲೇಜು, ಇಂಜಿನಿಯರಿಂಗ್ ಕಾಲೇಜು,  ತೆಂಕಿಲದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ಆಂಗ್ಲ ಮಾಧ್ಯಮ ಶಾಲೆ, ನರೇಂದ್ರ ಪಿ.ಯು. ಕಾಲೇಜು, ಅಂಬಿಕಾ ಪಿ.ಯು. ಹಾಗೂ ಪದವಿ ಕಾಲೇಜು, ಸಂತ ಫಿಲೋಮಿನಾ ಕಾಲೇಜು, ಜೂನಿಯರ್ ಕಾಲೇಜು ಕೊಂಬೆಟ್ಟು,  ಸುಧಾನ ವಸತಿಯುತ ಶಾಲೆ ಮಂಜಲ್ಪಡ್ಪು, ಅಕ್ಷಯ ಕಾಲೇಜು ಸಂಪ್ಯದಲ್ಲಿನ ಶಿಕ್ಷಕರು ಹಾಗೂ ಶಿಕ್ಷಕೇತರರೊಂದಿಗೆ ಮತಯಾಚಿಸುವ ಮೂಲಕ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಭೋಜೆಗೌಡರ ಪರ ಬಿರುಸಿನ ಪ್ರಚಾರ ನಡೆಸಲಾಯಿತು.