ಮಂಗಳೂರಿನಲ್ಲಿ ಹಾಡಹಗಲೇ ಜುವೆಲ್ಲರಿಗೆ ನುಗ್ಗಿ ಸಿಬಂದಿಯ ಹತ್ಯೆ ಬಂಗಾರ ಖರೀದಿಸುವ ಸೋಗಿನಲ್ಲಿ ಒಳಗೆ ಬಂದು ಕೃತ್ಯ
Friday, February 3, 2023
ಮಂಗಳೂರು:ನಗರದ ಹಂಪನಕಟ್ಟೆಯಲ್ಲಿ ಚೂರಿಯಿಂದ ಇರಿದು ಹತ್ಯೆ ವ್ಯಕ್ತಿಯೊಬ್ಬರನ್ನು ಮಾಡಲಾಗಿದೆ. ಮಾಂಡೋವಿ ಕಾರ್ ಶೋರೂಂ ಬಳಿ ಇರುವ ಮಂಗಳೂರು ಜುವೆಲ್ಲರಿಗೆ ನುಗ್ಗಿದ ಮುಸುಕುಧಾರಿ ಸಿಬಂದಿಯನ್ನು ಹತ್ಯೆ ಮಾಡಿದ್ದಾನೆ. ವ್ಯಕ್ತಿಯೊಬ್ಬ ಅಲ್ಲಿನ ಜುವೆಲ್ಲರಿ ಉದ್ಯೋಗಿ, ಅತ್ತಾವರ ನಿವಾಸಿ ರಾಘವೇಂದ್ರ (52) ಕೊಲೆಯಾದ ವ್ಯಕ್ತಿ. ಮಧ್ಯಾಹ್ನ ಮುಸುಕು ಹಾಕಿಕೊಂಡು ಬಂದಿದ್ದ ವ್ಯಕ್ತಿ ಕೃತ್ಯ ಎಸಗಿದ್ದಾನೆ.
ಆರೋಪಿ ಅರ್ಧ ಗಂಟೆಗೂ ಹೆಚ್ಚು ಕಾಲ ಜುವೆಲ್ಲರಿ ಒಳಗಿದ್ದು ಹೊರಗೆ ತೆರಳುವಾಗ ಹೆಲ್ಮೆಟ್ ಹಾಕ್ಕೊಂಡು ಹೋಗಿದ್ದಾನೆ. ಚಿನ್ನದ ಅಂಗಡಿಯಲ್ಲಿ ಈ ವೇಳೆ ರಾಘವೇಂದ್ರ ಮಾತ್ರ ಇದ್ದು 3.45ರ ವೇಳೆಗೆ ಮಾಲಕರು ಬಂದಾಗ ಕೃತ್ಯ ಬೆಳಕಿಗೆ ಬಂದಿದೆ. ಜುವೆಲ್ಲರಿಯಿಂದ ಚಿನ್ನದ ಸರ, ಉಂಗುರ ಕಳವಾಗಿರುವ ಬಗ್ಗೆ ಮಾಲಕರು ತಿಳಿಸಿದ್ದಾರೆ. ದರೋಡೆ ಕೃತ್ಯವೋ, ಕೊಲೆಗೆ ಬೇರೆ ಉದ್ದೇಶ ಇತ್ತೇ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪೊಲೀಸ್ ಕಮಿಷನರ್ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.