ಮಂಗಳೂರು; ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ಸಂತ್ರಸ್ತ ಪುರುಷೋತ್ತಮ ಪೂಜಾರಿಯವರಿಗೆ ಒಂದು ವಾರದೊಳಗೆ ಹೊಸ ಆಟೋ ರಿಕ್ಷಾ-ಶಾಸಕ ವೇದವ್ಯಾಸ ಕಾಮತ್ ಭರವಸೆ
Tuesday, January 17, 2023
ಮಂಗಳೂರು: ಕುಕ್ಕರ್ ಬಾಂಬ್ ಬ್ಲಾಸ್ಟ್ ನಲ್ಲಿ ಗಾಯಗೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ಆಟೋ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಅವರ ಮನೆಗೆ ಮಂಗಳೂರು ಉತ್ತರ ವಿಧಾನಸಭಾ ಶಾಸಕ ವೇದವ್ಯಾಸ ಕಾಮತ್ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದರು.
ಪುರುಷೋತ್ತಮ ಪೂಜಾರಿ ಅವರಿಗೆ ಹೊಸ ಆಟೋ ರಿಕ್ಷಾ ಜತೆಗೆ ಬಿಜೆಪಿ ವತಿಯಿಂದ ಐದು ಲಕ್ಷ ರೂ ನೀಡಲಾಗುವುದು,ಸರಕಾರದಿಂದ ಬರಬೇಕಾದ ಪರಿಹಾರವೂ ಶೀಘ್ರ ಬರುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ಶಾಸಕರು ಭರವಸೆ ನೀಡಿದರು.
ಮಾತ್ರವಲ್ಲದೆ ಎಆರ್ ಟಿಒ ಸ್ಥಳಕ್ಕೆ ಕರೆಯಿಸಿ ಶೀಘ್ರ ಪರವಾನಿಗೆ ವ್ಯವಸ್ಥೆ ಮಾಡುವಂತೆಯೂ ಸೂಚಿಸಿದರು. ಒಂದು ವಾರದೊಳಗೆ ಹೊಸ ಆಟೋ ರಿಕ್ಷಾ ದಾಖಲೆ ಸಮೇತ ನೀಡುವ ವ್ಯವಸ್ಥೆ ಆಗುವಂತೆ ಸೂಚಿಸಿದರು. ಆಟೋ ರಿಕ್ಷಾದ ಪೂರ್ಣ ವೆಚ್ಚವನ್ನು ತಾನೇ ಪಾವತಿಸುವುದಾಗಿ ಶಾಸಕರು ತಿಳಿಸಿದರು.